ಫೈಲೋ, ಕ್ವಿಂಟನಸ್ ಪೂಬ್ಲಿಲಿಯಸ್ -
	ಯಹೂದ್ಯ ಧರ್ಮದ ಪ್ರಸಿದ್ಧ ವ್ಯಾಖ್ಯಾನಕಾರ. ಏಸುಕ್ರಿಸ್ತನ ಸಮಕಾಲೀನನೆಂದು ಪ್ರತೀತಿ. ಅಲೆಕ್ಸಾಂಡ್ರಿಯಾದಲ್ಲಿ ಉಗಮಿಸಿದ ಗ್ರೀಕ್ ಮತ್ತು ರೋಮನ್ ಸಂಧಿಕಾಲದ ನಿಯೊಪ್ಲೇಟೋನಿಸಮ್ ದರ್ಶನೋದಯದಲ್ಲಿ ಇವನದೊಂದು ಮುಖ್ಯ ಪಾತ್ರ. ಇವನು ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಈ ಗ್ರಂಥಗಳೆಲ್ಲದರ ಉದ್ದೇಶ ಯಹೂದ್ಯ ಧರ್ಮದ ಶ್ರುತಿವಾಕ್ಯಗಳಿಗೂ ಪ್ಲೇಟೋನ ದರ್ಶನಕ್ಕೂ ಸಮನ್ವಯಗೊಳಿಸುವುದಾಗಿದೆ. ಜ್ಞಾನ ಅನ್ನುವ ಮಾತಿಗೆ ಈತ ವಿಶೇಷವಾದ ಅರ್ಥ ಕಲ್ಪಿಸಿದ್ದಾನೆ. ರಾಜಕಾರಣಿಯಾದ ಈತ ಸಾಮಾನ್ಯ ಪೌರರ ಹಿತದೃಷ್ಟಿಯಿಂದ ಮೂರು ಕಾನೂನುಗಳನ್ನು ಮಂಡಿಸಿದನೆನ್ನಲಾಗಿದೆ.
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ